Posts

ಹಾಗೇ ಗೀಚಿದ ಮನದಾಳದ ಮಾತು

ಹುಡುಕು ಶ ಬ್ದದಲ್ಲಿಯ ನಿಶ್ಯಬ್ದ ಹುಡುಕು ಸಂತೆಯಲ್ಲಿ‌ಯ ಶಾಂತಿಯ ಹುಡುಕು ಸಂಗದಲ್ಲಿಯ ನಿಸ್ಸಂಗವ ಹುಡುಕು ಸಾಗರದಲ್ಲಿಯ ನಿಶ್ತೆರೆಯ ಹುಡುಕು ಜ್ನಾನದಲ್ಲಿಯ ಮೌನವ ಹುಡುಕು ನಿನ್ನಲ್ಲಿ ನಿನೇಲ್ಲಿಎಂಬುದ ಹುಡುಕು. ಯೋಗ. ನಿನ್ನ ಅಚಲ ನಂಬಿಕೆಗೆ ಶರಣಾಗತಿಯಾಗು ಅದುವೇ ಭಕ್ತಿ ಯೋಗ ನಿನ್ನ ಕಾಯಕಕ್ಕೆ ಶರಣಾಗತಿಯಾಗು ಅದುವೇ ಕರ್ಮ ಯೋಗ ನಿನ್ನ ಪರಮ ಜ್ಞಾನಕ್ಕೆ ಶರಣಾಗತಿಯಾಗು ಅದವೇ ಜ್ಞಾನ ಯೋಗ ಮನಸ್ಸು ನಿನಗೇ ಶರಣಾಗತಿಯಾದರೆ ಅದವೇ ರಾಜ ಯೋಗ ಭಕ್ತಿ, ಕರ್ಮ, ಜ್ನಾನ, ರಾಜ ಯೋಗ, ಯಾವದಾದರೊಂದು ಯೋಗದ ಮೂಲಕವೇ ಪರಮಾತ್ಮನೊಂದಿಗೆ ಸಂಯೋಗ. ದೀಪ ಬೆಳಗಲಿ ಮನೆ ಮನೆಗಳಲ್ಲಿ ದೀಪ ಬೆಳಗಲಿ ಮನ ಮನದಲ್ಲಿ ದೀಪ ಬೆಳಗಲಿ ಮನೆ, ಮನದ ಕತ್ತಲೆ ಸೀಳುವ ದೀಪ ಉತ್ಸಾಹದಾ ದೀಪ, ಉಲ್ಲಾಸದಾ ದೀಪ ಸಹನೆಯ ದೀಪ, ಶಾಂತಿಯ ದೀಪ ಸಮಾನತೆಯ ದೀಪ, ಏಕತೆಯ ದೀಪ ಅದ್ಯಾತ್ಮದಾ ದೀಪ, ಆನಂದದಾ ದೀಪ ಜ್ಞಾನದಾ ದೀಪ, ಪರಮಸತ್ಯದಾ ದೀಪ ಬಸವ, ಬುದ್ದ, ಅಂಬೇಡ್ಕರರು ಬೆಳಗಿದ ದೀಪ ಬೆಳಗಲಿ ದೀಪ ಮನೆ ಮನೆಗಳಲ್ಲಿ, ಮನ ಮನದಲ್ಲಿ ಭರವಸೆಯೇ ಬೆಳಕು. ಭರವಸೆಯೇ ಬದುಕು, ಭರವಸೆಯೇ ಬೆಳಕು. ತಾಯಿಗೆ ತಾ ಹೆತ್ತ ಮಗು ಮುಂದೆ ಅಸರೆಯಾದೀತೆಂಬ ಭರವಸೆ ಮಗುವಿಗೆ ತಂದೆಯ ರಕ್ಷಣೆ ಇದೆಯೆಂಬ ಭರವಸೆ ಸತಿಗೆ ಪತಿಯ ಸರ್ವಸ್ವ ನಾನೇಯೆಂಬ ಭರವಸೆ ಪತಿಗೆ ಸತಿಯ ನಿಷ್ಕಾಮ ಪ್ರೇಮವೆ ಭರವಸೆ ತಮ್ಮನಿಗೆ ಅಕ್ಕನಲ್ಲಿರುವ ತಾಯಿ ಪ್ರೀತಿಯೇ ಭರವಸೆ ಅಕ್ಕನಿಗೆ ತಮ್ಮನಲ್ಲಿರುವ ತಂದೆ ಕಾಳಜಿಯೇ ಭರವಸೆ ಶಶಿಯ ಬೆಳಕಿಗೆ ರವಿ ಕ